ನಮಸ್ಕಾರ ನಮಸ್ಕಾರ ನಮಸ್ಕಾರ!! ಆಶ್ಚರ್ಯ ಆಯ್ತಾ ಯಾಕಪ್ಪ ಇಷ್ಟು ನಮಸ್ಕಾರ ಅಂತ.. ಏನಿಲ್ಲ ತುಂಬ ದಿವ್ಸ ಆಯ್ತಲ್ವ ಬರ್ದು ಅದಕ್ಕೆ ಕನ್ನಡಿಗರ ಮೇಲೆ ಸ್ವಲ್ಪ ಜಾಸ್ತಿ ಲವ್ ಬಂತು. ಓಕೆ ಬಿಡ್ರಿ ಮತ್ತೇನು ವಿಷಯ ಆರಾಮ ಎಲ್ಲ..
ಏನಿಲ್ಲ ಮೊನ್ನೆ ಟಿವಿ ನೋಡ್ತಾ ಇದ್ದೆ ನಮ್ಮ ದೇಶದ ಪ್ರಧಾನಿ ಸಿಂಗಣ್ಣ ಏನೋ ಹೇಳ್ತಾ ಇದ್ರು..ಅದೇನೋ ಈಜಿಪ್ಟ್ ಹೋಗಿ ಏನೋ ಹಲ್ಕಟ್ ಕೆಲಸ ಮಾಡ್ಕೊಂಡು ಬಂದ್ರಲ್ಲ , ಅದ್ಯಾವ್ದೋ ಮೆಪಲ್ಲಿ ಇರದ ಬಲುಚಿಸ್ತಾನ್ ಬಗ್ಗೆ ಏನೋ ಡೀಲ್ ಮಾಡವ್ನೆ ನನ್ಮಗ.. ಏನ್ ತಗೊಂಡು ಹೊಡ್ಕೊಳೋಣ ಹೇಳ್ರಿಪ್ಪ , ಪ್ರಧಾನ ಮಂತ್ರಿ ಅಲ್ಲರಿ ಅವ್ನು ನಿಧಾನ ಮಂತ್ರಿ..ಏನಂತಿರ
ಕೆಲವೊಮ್ಮೆ ಬೇಜಾರ ಆಗುತ್ತೆ ಯಾಕ ನಾವ್ ಹಿಗಿದಿವಿ ಅಂತ. ನಮ್ಮಲ್ಲಿ ತಾಕತ್ ಇಲ್ವಾ talent ಇಲ್ವಾ ಅದ್ರು ನಾವ್ ಯಾಕೆ ಇವರಿಗೆಲ್ಲ ಹೆದರಬೇಕು , ಇದಕ್ಕೆ ಏನ್ ಅಂತಾರೆ ಗೊತ್ತ "learned helplessness" ಅಂತಾರೆ , ನಮ್ಮ ಕೈಲಿ ಏನು ಆಗಲ್ಲ ಅಂತ ನಮ್ ಮನಸಲ್ಲಿ ಎಲ್ಲೋ ಗಟ್ಟಿಯಾಗಿ ಕುತ್ಬಿಟ್ಟಿದೆ , ಅದಕ್ಕೆ ನಾವ್ ಈರೀತಿ ಆಡೋದು . ನಮಗೆ ನೆಹರು ಸಾಹೇಬರು ಕೊಟ್ಟ ಮಹಾನ್ ಬಿರಿದು ಇದೆಅಲ್ವ " ಶಾಂತಿ ಪ್ರಿಯ ದೇಶ " ಅಂತ ಅದಕ್ಕೆ ನಾವೆಲ್ಲ ಶಾಂತಿ ಪ್ರಿಯರಾಗಿದಿವಿ. ತುಂಬ ಶಾಂತಿ ಪ್ರಿಯರಿಗೆ ಜಗತ್ತು "ಚಕ್ಕ" ಎಂಬ ಹಣಪಟ್ಟಿ ಹಾಕುತ್ತೆ ಕಣ್ರೀ ಅಲ್ವ.
ಈ ಪುಡಾರಿಗಳು ಮಾಡೋ ಹಲ್ಕಾ ಕೆಲ್ಸಕ್ಕೆ ನಮ್ಮ ಭಾರತ ದೇಶ ತುಂಬ ಬೆಲೆ ತೆತ್ಬೇಕಾಗುತ್ತೆ ನೋಡ್ತಾ ಇರಿ. ಪಾಪ ಅಲ್ಲಿ ಎಲ್ಲೊ ಇಂಡೋ ಪಾಕ್ ಸರಹದ್ದಿನಲ್ಲಿ ಜೀವ ಕೈಲಿ ಹಿಡ್ಕೊಂಡು ದೇಶಕ್ಕಾಗಿ, ನಮ್ಮೆಲ್ಲರ ಸುರಕ್ಷತೆಗಾಗಿ ಬಂದೂಕು ಹಿಡ್ಕೊಂಡು ಕೂತಿದಾನಲ್ವ ಅವ್ನಿಗೆ ನಾವ್ ಕೊಡೋದು ಇಷ್ಟೇ "ಪರಮ ವೀರ ಚಕ್ರ ". ಒಬ್ಬ ಸೈನಿಕನ ಜೀವನ ಅರ್ಥ ಮಾಡ್ಕೊಳೋ capacity ನಮ್ಮಂತ ಸಾಧಾರಣ ವ್ಯಕ್ತಿಗಳಿಗೆ ಇಲ್ಲ . ನಮ್ಮ ದೇಶದ ಹುಚ್ಚು ಜನ ಶಾರುಖ್ ಖಾನ್ ಗೆ ಅಮೇರಿಕಾ ೨ ಘಂಟೆ question ಮಾಡಿದಕ್ಕೆ ರೊಚ್ಚಿಗೆದ್ದು ಬಿಟ್ರು ಅದೇ ಜನ ನಮ್ಮ ಮಾಜಿ ರಕ್ಷಣಾ ಮಂತ್ರಿ ಮಾನ್ಯ george fernandes ಗೆ ಬಟ್ಟೆ ಬಿಚ್ಚಿ
ಅಮೇರಿಕಾ ಪರೀಕ್ಷೆ ಮಾಡ್ದಾಗ ಎಲ್ಲಿದ್ರು, ಹಾಳಾದ ಕೆಟ್ಟು ಕೆರ ಹಿಡಿದ ಈ ಮೀಡಿಯಾ ಎಲ್ಲಿತ್ತು ಸ್ವಲ್ಪ ೨ ಲೈನ್ ಬರೆದು ಬಿಟ್ಬಿಟ್ರು .
ನಮಗೆ ನಂ ದೇಶದ ಬಗ್ಗೆ ಅಭಿಮಾನ ಇಲ್ಲಾರಿ ಅದಕ್ಕೆ ನಮ್ಮ ಭಾರತ third world country ಅನ್ಸಿಕೊಂಡಿದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಗೆಳೆಯ ರಾಮ,
ಪ್ರತ್ಯುತ್ತರಅಳಿಸಿಚೆನ್ನಾಗಿ ಬರ್ದಿದಿಯ ಕಣೋ....ನಿಂಗೆ ಒಳಗಿನ ನೋವು ಕೋಪನ ಚೆನ್ನಾಗಿ ಹೊರ ಹಾಕೋ ಕಲೆ ಇದೆ.
ಏನ್ ಮಾಡೋಣ ಗೆಳೆಯ ನಮ್ಮ media is always biased ಅಂತ ಎಲ್ಲರಿಗೂ ಗೊತ್ತು,ಹಾಗೇನೇ ನಮ್ಮ medias' ನ ಸಾಕ್ತಿರೋದೆಲ್ಲ ವಿದೇಶಿ ಹಣ.
ಮೊದಲೇ ಹಣಕ್ಕೆ ನಿಯತ್ತು ಕಮ್ಮಿ ಅಂಥದ್ದರಲ್ಲಿ ಬೇರೆ ದೇಶದ ಹಣ ನಮ್ಮ ರಕ್ತಕ್ಕೆ,ಭಾವನೆಗಳಿಗೆ ಬೆಲೆ ಕೊಡುತ್ತಾ?
ಸುನಿಲ್.