ಭಾನುವಾರ, ಜೂನ್ 14, 2009

ನೆನಪಿನ ಮರುಭೂಮಿ..

ನನ್ನ ಮೊಟ್ಟ ಮೊದಲ ಕನ್ನಡ ಬ್ಲಾಗ್ಗೆ ಸ್ವಾಗತ...
ನೋಡ್ರಪ್ಪ ನನಿಗೆ ಕನ್ನಡ ಸ್ವಲ್ಪ ಕಷ್ಟ ಕೊಡುತ್ತೆ..ಮಾತಾಡಕ್ಕೆ ಹೇಳಿ ಎಲ್ಲ ತರದ ಕನ್ನಡ ಮಾತಾಡ್ತೀನಿ ಆದ್ರೆ ಬರಿಯಕ್ಕೆ ಕೂತರೆ ಎಲ್ಲ ಬ್ಲಾಂಕ್ .. ನನ್ನ ಗೆಳೆಯರಾದ ಸುನಿಲ್ (ಅನಿಕೇತನ) ಮತ್ತು ವೀರೇಶ್ ಹಿರೆಮಟ್ ಪಾಟೀಲ್ ಅವರ ಬ್ಲಾಗ್ ನೋಡಿ ಮೈ ಎಲ್ಲ ರಕ್ತ ಬರೋವರ್ಗು ಕೆರ್ಕೊಂಡು ಸಾಯೋಹಾಗೆ ಅದಮೇಲೆ ಅನ್ಕೊಂಡೆ ನಾನು ಕನ್ನಡದಲ್ಲಿ ಬ್ಲಾಗ್ ಬರೀಬೇಕು ಅಂತಾ.. ಬರಿಯಕ್ಕೆ ಅಲ್ಲ ಸಾರೀ ಟೈಪ್ ಮಾಡೋಕೆ ಕುತಾಗಲೇ ಗೊತ್ತಾಗಿದ್ದು ಕಣ್ರೀ ಕನ್ನಡ ಎಷ್ಟು ಕಷ್ಟ ಅಂತಾ.. ಬಿಡಲ್ಲ ರೀ ನಾನು ಎಸ್ಟೆ ಕಷ್ಟ ಆಗಲಿ ಬರೀತೀನಿ.. ಬರದು ನಿಮ್ಮನ್ನು ನಗಿಸ್ತಿನಿ.. ಅಬ್ಬ ಇಷ್ಟು ಬರಿಯುವವರೆಗೂ ನೀರಿಳಿತು ಕಣ್ರೀ.. ಒಂದು ಘಂಟೆ ಇಂದ ಬರಿತ ಇದೀನಿ...
ಕನ್ನಡ ಎಷ್ಟು ಚಂದ ಅಲ್ವ.. ನನಿಗೆ ಕನ್ನಡದ ಸವಿ ಗೊತ್ತಾಗಿದ್ದು ನಾನು ಈ ದುಬೈ ಎಂಬ ಅರಬರ ನಾಡಿಗೆ ಬಂದಾಗ..
ಸಾವಿರಾರು ಕನಸು ಕಂಡು ತಾಯ್ನಾಡನ್ನು ನನ್ನವರನ್ನು ನನ್ನ ನೆಚ್ಚಿನ ಗೆಳೆಯರನ್ನು ಬಿಟ್ಟು ಬಂದ ನನಿಗೆ ಇಲ್ಲಿ ಸಿಕ್ಕಿದ್ದು ಬೊಗಸೆ ತುಂಬ ನೀರಾಷೆ.. ಯಾಕೆ ಹೇಳಿ ಯಾಕಂದ್ರೆ ಇಲ್ಲಿ ನೀರು ತುಂಬ ಕಾಸ್ಟ್ಲಿ ಅದಕ್ಕೆ ನೀರ್ -ಆಶೆ ಆಗಿದ್ದು..
ದುಡ್ಡು ಕಣ್ರೀ ದುಡ್ಡು..ಎಲ್ಲರಿಗು ಬೇಕಾದ ಈ ದುಡ್ಡು ನನ್ನನು ಎರಡುವರೆ ಸಾವಿರ ಮೈಲು ದೂರ ಬರೋಹಾಗೆ ಮಾಡ್ತು..
ನಾನು ಪಟ್ಟ ಕಷ್ಟ..ನನ್ನು ಆ ಜೀವಕ್ಕಿಂತ ಹೆಚ್ಚು ಪ್ರೀತಿಯ ಯಮಹ ಬೈಕ್ ರೀಪೈರ್ ಮಾಡೋಕೆ ಹಣ ಇಲ್ದೆ ನಾನು ಕಷ್ಟ ಪಟ್ಟ ಆ ದಿನಗಳು ಇನ್ನು ನನ್ನು ನೆನಪಿಂದ ಮಾಸಿಲ್ಲ..
ಆ ನನ್ನ ಗೆಳೆಯರಾದ ಪ್ರಶಾಂತ್ ಮತ್ತು ಕಿಟ್ಟಿಯ ಪ್ರೀತಿ ಮತ್ತು ಬೈಗುಳ ಇನ್ನು ನೆನಪಾಗುತ್ತೆ.. ಒಬ್ಬನೇ ಇಲ್ಲಿ ಜುಮ್ಮೈರ ಬೀಚ್ ಅಲ್ಲಿ ಕೂತರೆ ಹಳೆ ನೆನಪು ಕಣ್ಣಲ್ಲಿ ಅಲೆಯಂತೆ ಉಕ್ಕಿ ಬರುತ್ತೆ..ಎಷ್ಟು ಸಲ ಆ ಅರಬರ ಸಮುದ್ರದಲ್ಲಿ ನನ್ನ ಕನ್ನಡದ ಕಣ್ಣಿರು ಬೇರೆತಿದೆಯೋ ಗೊತ್ತಿಲ್ಲ.. ಆದ್ರೆ ಜೀವನ ಹೀಗೆ ಅಂತಾ ಒಂಟಿ ಮನಸಿಗೆ ಸಮಾಧಾನ ಹೇಳ್ತಾ ಇದೀನಿ.
ಎಸ್ಟೋ ಸಲ ಅನ್ಕೊಂಡಿದಿನಿ ನೆನಪು ಅನ್ನೋದು ಮರಳುಗಾಡು. ಒಮ್ಮೆ ಕಳೆದುಹೋದ್ರೆ ದಾರಿ ಸಿಗೋದು ತುಂಬ ಕಷ್ಟ.. ಅಲ್ವ ??